مَا مَعِي وَجَهْ قَابِل بِهْ سِوَى حُسُنْ ظَنِّي
ನಿನ್ನನ್ನು ಎದುರಿಸಲು ನಿನ್ನ ಮೇಲಿರುವ ನನ್ನ ಸದ್ಭಾವನೆಯ ಹೊರತು ನನ್ನ ಬಳಿ ಬೇರೇನೂ ಇಲ್ಲ.
Kn
مَا مَعِي وَجَهْ قَابِل بِهْ سِوَى حُسُنْ ظَنِّي
فِيكْ يَا رَبِّ فَارْحَمْنِي وَلَا تَمْتَحِنِّي
ನಿಮ್ಮ ಮುಂದೆ ಬರಲು ನಿಮ್ಮ ಮೇಲಿರುವ ಶುಭ ನಿರೀಕ್ಷೆಯ ಹೊರತು ಬೇರೇನೂ ನನ್ನ ಬಳಿಯಿಲ್ಲ
ಹಾಗಾಗಿ ನನ್ನ ಪ್ರಭುವೇ, ನನ್ನ ಮೇಲೆ ಕರುಣೆ ತೋರು ಮತ್ತು ನನ್ನನ್ನು ಪರೀಕ್ಷೆಗೆ ಒಡ್ಡಬೇಡ
تُبْتْ يَا رَبِّ فَاقْبَلْ تَوْبَتِي وَاعْفُ عَنِّي
وَامْحُ ذَنْبِي وَسَامِحْ كُلَّ تَقْصِيرْ مِنِّي
ನನ್ನ ಪ್ರಭುವೇ, ನಾನು ಪಶ್ಚಾತ್ತಾಪಪಟ್ಟಿದ್ದೇನೆ, ನನ್ನ ಪಶ್ಚಾತ್ತಾಪವನ್ನು ಸ್ವೀಕರಿಸು ಮತ್ತು ನನ್ನನ್ನು ಕ್ಷಮಿಸು
ನನ್ನ ಪಾಪಗಳನ್ನು ಅಳಿಸಿಹಾಕು ಮತ್ತು ನನ್ನ ಪ್ರತಿಯೊಂದು ಲೋಪದೋಷಗಳನ್ನು ಮನ್ನಿಸು
خِفِتْ مِنْ عَاقِبَةْ أَمْرِي فَجُدْ لِي بِأَمْنِي
مَحِضْ فَضْلٍ وَإِحْسَانٍ وَجُودٍ وَمَنِّ
ನನ್ನ ಅಂತ್ಯದ ಬಗ್ಗೆ ನಾನು ಭಯಪಡುತ್ತಿದ್ದೇನೆ, ಆದ್ದರಿಂದ ಕೃಪೆಯಿಂದ ನನಗೆ ಸುರಕ್ಷತೆಯನ್ನು ನೀಡು
ಕೇವಲ ನಿನ್ನ ಅನುಗ್ರಹ, ದಯೆ, ಔದಾರ್ಯ ಮತ್ತು ಉಪಕಾರದ ಮೂಲಕ
آه مِنْ عَثْرَتِي يَا رَبِّ مِنْهَا أَقِلْنِي
زَادْ ذَنْبِي وَمِنْ كُثْرِ الْخَطَا حَارْ ذِهْنِي
ಅಯ್ಯೋ ನನ್ನ ಪ್ರಭುವೇ, ನನ್ನ ಎಡವಟ್ಟುಗಳಿಂದ ನನ್ನನ್ನು ಮೇಲೆತ್ತು
ನನ್ನ ಪಾಪಗಳು ಹೆಚ್ಚಾಗಿವೆ ಮತ್ತು ತಪ್ಪುಗಳ ಬಾಹುಳ್ಯದಿಂದ ನನ್ನ ಮನಸ್ಸು ಗೊಂದಲಕ್ಕೀಡಾಗಿದೆ
أَدْرِكْ أَدْرِكْ بِتَعْجِيلِ الْفَرَجْ وَانْتَقِدْنِي
وَاعْطِنِي عِلِمْ مِنْكَ يَا إِلَهِي لَدُنِّي
ನನ್ನ ಸಹಾಯಕ್ಕೆ ಧಾವಿಸು, ಶೀಘ್ರವಾಗಿ ಪರಿಹಾರ ನೀಡಿ ನನ್ನನ್ನು ರಕ್ಷಿಸು
ಮತ್ತು ನನ್ನ ದೇವನೇ, ನಿನ್ನಿಂದಲೇ ನೇರವಾಗಿ ಲಭಿಸುವ ಜ್ಞಾನವನ್ನು ನನಗೆ ಕರುಣಿಸು
يَنْجَلِي بِهْ عَنِ الْقَلْبِ الْصَّدِى كُلَّ رَيْنِ
ياَ سَمِيعَ الْدُّعَاءْ سَلْكَ اسْتَجِبْ وَاسْتَمِعْنِي
ಆ ಜ್ಞಾನದಿಂದ ಹೃದಯದ ಮೇಲಿರುವ ತುಕ್ಕು ಮತ್ತು ಪ್ರತಿಯೊಂದು ಮರೆಯು ದೂರವಾಗಲಿ
ಓ ಪ್ರಾರ್ಥನೆಗಳನ್ನು ಆಲಿಸುವವನೇ, ನನಗೆ ಉತ್ತರಿಸು ಮತ್ತು ನನ್ನ ಮೊರೆಯನ್ನು ಕೇಳು
مَا لِي إِلَّا أَنْتَ مُعْطِي
مَا لِي إِلَّا أَنْتَ مُغْنِي
ನನಗೆ ನೀಡಲು ನಿನ್ನ ಹೊರತು ಬೇರಾರೂ ಇಲ್ಲ
ನನ್ನನ್ನು ಸಮೃದ್ಧಿಗೊಳಿಸಲು ನಿನ್ನ ಹೊರತು ಬೇರಾರೂ ಇಲ್ಲ