بِفَاطِمَةْ قَدْ صَفَا حَالِي
ಫಾತಿಮೆಯಿಂದ ನನ್ನ ಸ್ಥಿತಿಯು ನಿರ್ಮಲವಾಯಿತು.
Kn
بِفَاطِمَةْ قَدْ صَفَا حَالِي وَنِلْتُ الْمَرَامْ
بِضْعَة مُحَمَّدْ حَبِيبِ اللهْ خَيْرِ الْأَنَامْ
ಫಾತಿಮಾಳಿಂದ ನನ್ನ ಸ್ಥಿತಿ ಪವಿತ್ರವಾಯಿತು, ನಾ ಬಯಸಿದ್ದೆಲ್ಲವನ್ನೂ ಪಡೆದೆ
ಅಲ್ಲಾಹನ ಪ್ರಿಯ ಮುಹಮ್ಮದರ ಅಂಶವೇ, ಮಾನವಕುಲದಲ್ಲೇ ಶ್ರೇಷ್ಠರೇ
أَعْلَى لَهَا اللهْ قَدْراً فِي الْعُلَا وَالْمَقَامْ
نِعْمَ الْبَتُولْ الْرَّضِيَّةْ نُورْ كُلِّ الْظَّلَامْ
ಅಲ್ಲಾಹನು ಅವಳ ಪದವಿ ಮತ್ತು ಸ್ಥಾನವನ್ನು ಉನ್ನತಕ್ಕೆ ಏರಿಸಿದನು
ಎಂತಹ ಶ್ರೇಷ್ಠ ಪವಿತ್ರವಂತೆ ಅವಳು, ಪ್ರತಿ ಕತ್ತಲೆಯಲ್ಲೂ ಬೆಳಗುವ ಜ್ಯೋತಿ
أُمِّ الْحَسَنْ وَالْحُسَيْنْ أَهْلِ الْمَرْقَى الْعِظَامْ
لَهُمْ عَطَايَا مِنَ الْمَوْلَى كِبَارٌ جِسَامْ
ಮಹೋನ್ನತ ಸ್ಥಾನಕ್ಕೇರಿದ ಹಸನ್ ಮತ್ತು ಹುಸೈನರ ಮಾತೆ
ಅವರು ಪರಮಾತ್ಮನ ಶ್ರೇಷ್ಠ ಮತ್ತು ದಿವ್ಯ ಉಡುಗೊರೆಗಳ ಸ್ವೀಕರ್ತರು
هُمْ سَادَةَ أَهْلِ الْجِنَانِ الْعَالِيَةْ يَا غُلَامْ
مَنْ حَبَّهُمْ صِدِقْ بَا يِسْكُنْ بِدَارِ الْسَّلَامْ
ಅವರು ಉನ್ನತ ಸ್ವರ್ಗದ ಯಜಮಾನರು
ಅವರನ್ನು ಸತ್ಯವಾಗಿ ಪ್ರೀತಿಸುವವರು ಶಾಂತಿಯ ಧಾಮದಲ್ಲಿ ನೆಲೆಸುವರು
وَمَنْ تَعَلَّقْ بِهِمْ يَظْفَرْ بِنَيْلِ الْمَرَامْ
أَكْرَمْتِ يَا بِضْعَةَ أَحْمَدْ فَانْعَمِي بِالْتَّمَامْ
ಅವರನ್ನು ಅವಲಂಬಿಸಿದವರು ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುವರು
ಓ ಅಹ್ಮದರ ಅಂಶವೇ, ನೀವೆಷ್ಟು ಉದಾರಿಗಳು, ನಿಮ್ಮ ಅನುಗ್ರಹವನ್ನು ಪೂರ್ಣಗೊಳಿಸಿರಿ
وَامْنَحِي عَبْدَكُمْ فِي الْقُرْبْ أَعْلَى وِسَامْ
نَقُومْ بِحَمِلْ الْرَّيَاتِ الْهُدَ أَحْسَنْ قِيَامْ
ನಿಮ್ಮ ದಾಸನಿಗೆ ಅತ್ಯುನ್ನತ ಸಾಮೀಪ್ಯದ ಗೌರವವನ್ನು ನೀಡಿರಿ
ಸನ್ಮಾರ್ಗದ ಧ್ವಜವನ್ನು ಅತ್ಯುತ್ತಮವಾಗಿ ಎತ್ತಿ ಹಿಡಿಯುವ ಗೌರವವನ್ನು ಕರುಣಿಸಿರಿ
تَعُمْ دَعْوَتُهْ فِي الْأَكْوَانْ كُلِّ الْأَنَامْ
نِلْبَسْ خِلَعْ إِرْثْ مَا يَصِفْ سَنَاهَا كَلَامْ
ಆ ಪ್ರವಾದಿಯ ಕರೆ ಸಮಸ್ತ ಲೋಕದ ಮಾನವರನ್ನು ಆವರಿಸಲಿ
ವರ್ಣಿಸಲಾಗದ ಪ್ರಭೆಯುಳ್ಳ ಪ್ರವಾದಿಯ ಪರಂಪರೆಯ ವಸ್ತ್ರವನ್ನು ನಮಗೆ ತೊಡಿಸಿರಿ
يَا نُورْ قَلْبِي وَيَا أُمِّي عَلَيْكِ الْسَّلَامْ
فِي كُلِّ حَالٍ وَشَأْنٍ كُلِّ لَحْظَةْ دَوَامْ
ಓ ನನ್ನ ಹೃದಯದ ಜ್ಯೋತಿಯೇ, ನನ್ನ ತಾಯಿಯೇ, ನಿಮಗೆ ಶಾಂತಿಯಾಗಲಿ
ಪ್ರತಿ ಸ್ಥಿತಿಯಲ್ಲಿ, ಪ್ರತಿ ಕ್ಷಣದಲ್ಲೂ ಅದು ನಿರಂತರವಾಗಿರಲಿ
عَلَيْكِ صَلَّى إِلَهِي مَعَ أَبِيكِ الْإِمَامْ
إِمَامْ كُلِّ الْوَرَى فِي كُلِّ خَاصٍّ وَعَامْ
ನಿಮ್ಮ ಮತ್ತು ನಿಮ್ಮ ತಂದೆಯಾದ ಇಮಾಮರ ಮೇಲೆ ಅಲ್ಲಾಹನ ಕೃಪೆಯಿರಲಿ
ಸಮಸ್ತ ಸೃಷ್ಟಿಗಳ, ಗಣ್ಯರ ಮತ್ತು ಸಾಮಾನ್ಯರ ನಾಯಕರಿವರು
الْشَّافِعِ الْمُبْتَغَ يَوْمَ الْلِّقَاءْ وَالْزَّهَامْ
يَوْمِ الْمَلَائِكْ تُنَادِي جَمِعْ كُلِّ الْأَنَامْ
ಸಮಾಗಮದ ಆ ಭೀಕರ ದಿನದಂದು ಬಯಸಿದ ಮಧ್ಯಸ್ಥಗಾರರಿವರು
ದೇವದೂತರು ಇಡೀ ಸಭೆಯನ್ನು ಉದ್ದೇಶಿಸಿ ಕರೆಯುವ ಆ ದಿನ
غُضُّوا أَبْصَارَكُمْ تَمُرْ بِنْتِ الْنَّبِيِ بِالْسَّلَامْ
وَنَكِّسُوا رُؤُوسَكُمْ مَا أَعْظَمَهْ وَاللهْ مَقَامْ
"ನಿಮ್ಮ ದೃಷ್ಟಿ ತಗ್ಗಿಸಿರಿ, ಪ್ರವಾದಿ ಪುತ್ರಿಯು ಸುರಕ್ಷಿತವಾಗಿ ಸಾಗುತ್ತಿದ್ದಾರೆ
ತಲೆ ಬಾಗಿಸಿರಿ", ಓ ಅಲ್ಲಾಹನೇ ಎಂತಹ ಭವ್ಯವಾದ ಸ್ಥಾನವಿದು!
تِذَكَرِينِي مَعَكِ أَعْبُرْ وَمَنْ لَهُ ذِمَامْ
حَاشَاكِ يَا أُمَّنَا تِنْسِينْ هَذَا الْغُلَامْ
ನನ್ನನ್ನು ನೆನೆಯಿರಿ, ನಿಮ್ಮ ಆಶ್ರಯದಲ್ಲಿ ನಾನು ದಾಟುವಂತಾಗಲಿ
ಓ ತಾಯಿಯೇ, ನಿಮ್ಮ ಈ ಬಾಲಕನನ್ನು ನೀವು ಮರೆಯಲು ಹೇಗೆ ಸಾಧ್ಯ?
مَحْسُوبَكُمْ يَرْتَجِيهْ مِنْكُمْ بِهِ الْإِهْتِمَامْ
أَنْتُمْ مَرَامُهْ وَمَقْصُودُهْ وَنِعْمَ الْمَرَامْ
ನಿಮ್ಮ ಈ ಮಗು ನಿಮ್ಮ ಕೃಪಾಕಟಾಕ್ಷವನ್ನು ಹಂಬಲಿಸುತ್ತಿದೆ
ನೀವೇ ಅವನ ಗುರಿ ಮತ್ತು ಆಶಯ, ಎಂತಹ ಶ್ರೇಷ್ಠ ಆಶಯವಿದು!
يَا بِنْتَ طه فُؤَادِي فِي مَحَبَّتِكْ هَامْ
وَاللهْ أَنْتُمْ مُرَادِي فِي الْدُّنَا وَالْقِيَامْ
ಓ ತಾಹಾ ಪುತ್ರಿಯೇ, ನನ್ನ ಹೃದಯವು ನಿಮ್ಮ ಪ್ರೀತಿಯಲ್ಲಿ ಲೀನವಾಗಿದೆ
ಅಲ್ಲಾಹನ ಸಾಕ್ಷಿಯಾಗಿ, ಈ ಲೋಕ ಮತ್ತು ಪರಲೋಕದಲ್ಲಿ ನೀವೇ ನನ್ನ ಆಶಯ
وَمَا أَنَا إِلَّا بِكُمْ يَا سَادَتِي يَا كِرَامْ
عَلَيْكِ مَعَ وَالِدِكْ أَزْكَى الْصَّلَاةْ وَالسَّلَامْ
ಓ ನನ್ನ ಉದಾರಿ ಒಡೆಯರೇ, ನಿಮ್ಮ ಹೊರತು ನಾನೇನೂ ಅಲ್ಲ
ನಿಮ್ಮ ಮತ್ತು ನಿಮ್ಮ ತಂದೆತಾಯಿಯರ ಮೇಲೆ ಅತ್ಯಂತ ಪವಿತ್ರವಾದ ಕೃಪೆ ಮತ್ತು ಶಾಂತಿಯಿರಲಿ
وَأَهْلِ الْكِسَاءْ وَأَهْلِ بَيْتِهْ عَالِيِّينَ الْمَقَامْ
وَالْصَّحْبْ أَجْمَعْ وَمَنْ عَلَى هُدَاهْ اِسْتَقَامْ
ಅಹ್ಲುಲ್ ಕಿಸಾ ಮತ್ತು ಉನ್ನತ ಸ್ಥಾನದ ಅವರ ಕುಟುಂಬದವರ ಮೇಲೆ
ಎಲ್ಲಾ ಸಹಚರರು ಮತ್ತು ಸನ್ಮಾರ್ಗದಲ್ಲಿ ದೃಢವಾಗಿರುವವರ ಮೇಲೆ ಶಾಂತಿಯಿರಲಿ