مَا لِي سِوَاكْ هَمْ وَأَنْتَ تَعْلَمْ
ನಿನಗಿಂತ ಬೇರೆ ಚಿಂತೆ ನನಗಿಲ್ಲ ಮತ್ತು ನಿನಗೆ ಅದು ತಿಳಿದಿದೆ.
Kn
مَا لِي سِوَاكْ هَمْ وَأَنْتَ تَعْلَمْ
فَالْقُرْبُ مَغْنَمْ وَالْبُعْدُ مَغْرَمْ
ನಿನಗಿಂತ ಬೇರೆ ಚಿಂತೆಯಿಲ್ಲ ನನಗೆ, ನೀನು ಬಲ್ಲೆ
ಸಾಮೀಪ್ಯವು ಲಾಭವು, ದೂರವಾಗುವುದು ನಷ್ಟವು
خُذْنِي إِلَيْكَ بَيْنَ يَدَيْكَ
حُسِبْتُ عَلَيْكَ فِي كُلِّ مَا أَعْلَمْ
ನನ್ನನ್ನು ನಿನ್ನತ್ತ ಸೆಳೆದುಕೋ, ನಿನ್ನ ಮಡಿಲಿಗೆ
ನಾ ತಿಳಿದಿರುವ ಅದೆಲ್ಲದರಲ್ಲೂ ನಾನು ನಿನ್ನವನೆಂದು ಪರಿಗಣಿಸಲ್ಪಟ್ಟಿರುವೆ
أَنْتَ مُرَادِي فَكُنْ لِيْ هَادِي
فَالْقَلْبُ صَادِي فَزِلْ لِيْ ذَا الْهَمْ
ನೀನೇ ನನ್ನ ಆಶೆ, ನೀನೇ ಮಾರ್ಗದರ್ಶಿಯಾಗು
ಹೃದಯವು ಬಾಯಾರಿದೆ, ಈ ದುಃಖವನ್ನು ನನ್ನಿಂದ ಹೋಗಲಾಡಿಸು
مَنْ ذَا يَكُنْ لِي إِنْ لَمْ تَكُنْ لِي
تَرَى لِذُلِّي وَأَنْتَ أَرْحَمْ
ನೀನು ನನಗಿಲ್ಲದಿದ್ದರೆ ಇನ್ನು ನನಗಾರುಂಟು?
ನನ್ನ ದೈನ್ಯತೆಯನ್ನು ನೀನು ಕಾಣುವೆ, ನೀನೇ ಪರಮ ಕರುಣಾಮಯಿ
كَمْ ذَا أُنَادِي يَا خَيْرَ هَادِي
يَكْفِي بُعَادِي فَالْجُودُ قَدْ عَمْ
ಓ ಶ್ರೇಷ್ಠ ಮಾರ್ಗದರ್ಶಿಯೇ, ನಾ ಎಷ್ಟು ಬಾರಿ ಕೂಗಿಲ್ಲ?
ದೂರವಿರುವುದು ಸಾಕು, ನಿನ್ನ ಔದಾರ್ಯವು ಹರಿದು ಬರುತ್ತಿದೆ
نُورُ الْوِصَالِ مَهْرُهُ غَالِي
سِوَاكَ مَا لِي جُدْ وَتَكَرَّمْ
ಮಿಲನದ ಬೆಳಕಿನ ಮೌಲ್ಯವು ಬಹು ದೊಡ್ಡದು
ನಿನ ಹೊರತು ನನಗಾರು ಇಲ್ಲ, ಕೃಪೆ ತೋರಿ ಅನುಗ್ರಹಿಸು
قُرْبِي وَبُعْدِي سِيَّانِ عِنْدِي
لِأَنَّ رُشْدِي فِيمَا تَقَسِّمْ
ಹತ್ತಿರವಿರುವುದು ಅಥವಾ ದೂರವಿರುವುದು ನನಗೆ ಸಮಾನ
ಏಕೆಂದರೆ ನನ್ನ ಮಾರ್ಗವು ನೀನು ವಿಧಿಸಿದುದರಲ್ಲಿದೆ
فَاجْعَلْ هِبَاتِي رُوحَ الْحَيَاةِ
حَبِيبْ ذَاتِي طه الْمُعَلِّمْ
ನನ್ನ ಉಡುಗೊರೆಗಳನ್ನು ಜೀವನದ ಚೈತನ್ಯವಾಗಿಸು
ನನ್ನ ಅಸ್ತಿತ್ವದ ಪ್ರಿಯನೇ, ಶಿಕ್ಷಕನಾದ ತಾಹಾ
تَعْلَمْ لِقَصْدِي حِبِّي وَوُدِّي
فَكُنْ لِلْكُرْدِي فِي كُلِّ مَغْنَمْ
ನನ್ನ ಉದ್ದೇಶ, ಪ್ರೀತಿ ಮತ್ತು ಅನುರಾಗವನ್ನು ನೀನು ಬಲ್ಲೆ
ಪ್ರತಿಯೊಂದು ಜಯದಲ್ಲೂ ಈ ಕುರ್ದಿಯ ಜೊತೆಗಿರು
صَلَاةُ رَبِّي لِحَبِيبِ قَلْبِي
طه الْمُرَبِّي عَلَيْهِ سَلَّمْ
ನನ್ನ ಒಡೆಯನ ಹರಕೆಗಳು ನನ್ನ ಹೃದಯದ ಪ್ರಿಯನ ಮೇಲಿರಲಿ
ಮಾರ್ಗದರ್ಶಕನಾದ ತಾಹಾ ಅವರ ಮೇಲೆ ಶಾಂತಿಯಿರಲಿ