هَذَا الْمَقَامُ الَّذِي لَاذَتْ بِهِ الْأُمَمُ
ಸಕಲ ರಾಷ್ಟ್ರಗಳು ಆಶ್ರಯ ಪಡೆದ ಸ್ಥಾನವಿದು.
Kn
هَذَا الْمَقَامُ الَّذِي لَاذَتْ بِهِ الْأُمَمُ
وَأَذْعَنَتْ لِعُلَاهُ الْعُرْبُ وَالْعَجَمُ
ಈ ಪುಣ್ಯ ಸ್ಥಾನವಿದು ಎಲ್ಲಾ ರಾಷ್ಟ್ರಗಳು ಆಶ್ರಯ ಪಡೆದ ನೆಲೆಯು
ಅರಬ್ಬರು ಮತ್ತು ಅರಬ್ಬೇತರರು ಇದರ ಉನ್ನತಿಗೆ ತಲೆಬಾಗಿದರು
هَذَا مَقَامُ رَسُولِ اللَّهْ أَكْرَمُ مَنْ
جَاءَتْهُ مِنْ رَبِّهِ الْأَحْكَامُ وَالْحِكَمُ
ಇದು ಅಲ್ಲಾಹನ ಸಂದೇಶವಾಹಕರ ಸ್ಥಾನ, ಇವರು ಅತ್ಯಂತ ಶ್ರೇಷ್ಠರು
ಯಾರಿಗೆ ಪ್ರಭುವಿನಿಂದ ಕಟ್ಟಳೆಗಳು ಮತ್ತು ಜ್ಞಾನವು ಪ್ರಾಪ್ತವಾದವು
هَذَا مُحَمَّدُ الْهَادِي الَّذِي مُحِيَتْ
عَنَّا بِنُورِ هُدَاهُ الْظُّلْمُ وَ الْظُّلَمُ
ಇವರೇ ಮಾರ್ಗದರ್ಶಕ ಮುಹಮ್ಮದ್, ಇವರ ನೇರ ಹಾದಿಯ ಬೆಳಕಿನಿಂದ
ನಮ್ಮಿಂದ ಅನ್ಯಾಯ ಮತ್ತು ಅಂಧಕಾರಗಳು ಅಳಿಸಿಹೋದವು
هَذَا الَّذِي قَدْ سَمَا فَوْقَ الْسَّمَا
إِلَى مَقَامِ عِزٍّ تَنَاهَتْ دُونَهُ الْأُمَمُ
ಇವರು ಆಕಾಶಗಳಿಗೂ ಮಿಗಿಲಾದ ಎತ್ತರಕ್ಕೆ ಏರಿದವರು
ಇತರ ರಾಷ್ಟ್ರಗಳು ತಲುಪಲಾಗದ ಅಂತಹ ಘನತೆಯ ಸ್ಥಾನಕ್ಕೆ
يَا سَيِّدِي يَا رَسُولَ اللَّهْ يَا أَمَلِي
يَا مَنْ أَلُوذُ بِهِ إِنْ زَلَّتِ الْقَدَمُ
ಓ ನನ್ನ ನಾಯಕನೇ, ಓ ಅಲ್ಲಾಹನ ದೂತರೇ, ಓ ನನ್ನ ಆಶಾಕಿರಣವೇ
ಹೆಜ್ಜೆ ಎಡವಿದಾಗ ನಾನು ಯಾರ ಆಶ್ರಯ ಪಡೆಯುವೆನೋ ಅಂತಹವರೇ
بِكَ اهْتَدَيْتُ إِلَى الْإِيمَانِ فَاتَّصَلَتْ
بِذَاكَ عِنْدِي مِنْ أَفْضَالِكَ الْنِّعَمُ
ನಿಮ್ಮ ಮೂಲಕವೇ ನನಗೆ ಸತ್ಯವಿಶ್ವಾಸದ ದಾರಿ ದೊರೆತದ್ದು
ಆ ಮೂಲಕ ನಿಮ್ಮ ಕೃಪೆಯಿಂದಲೇ ನನಗೆ ಒಳಿತುಗಳು ಲಭಿಸಿದವು
صَلَّى عَلَيْكَ إِلَهُ الْخَلْقِ مَا سَجَعَتْ
وَرْقٌ وَمَا هَطَلَتْ مِنْ سُحْبِهَا دِيَمُ
ಸೃಷ್ಟಿಕರ್ತನು ನಿಮ್ಮ ಮೇಲೆ ಆಶೀರ್ವಾದ ಸುರಿಸಲಿ, ಎಲ್ಲಿಯವರೆಗೆ
ಹಕ್ಕಿಗಳು ಕಲರವ ಮಾಡುತ್ತವೋ ಮತ್ತು ಮೋಡಗಳು ಮಳೆ ಸುರಿಸುತ್ತವೋ ಅಲ್ಲಿಯವರೆಗೆ