Kn
طَابَ لِي خَلْعُ عِذَارِي
فِي هَوَى الْبَدْرِ الْتَّمَامْ
ನನ್ನ ಮೈಮರೆವು ನನಗೆ ಹಿತವೆನಿಸಿದೆ
ಪೂರ್ಣ ಚಂದಿರನ ಮೇಲಿನ ನನ್ನ ಪ್ರೇಮದಲ್ಲಿ
بِافْتِقَارِي وَانْكِسَارِي
أَرْتَجِيْ نَيْلَ الْمَرَامْ
ನನ್ನ ಬಡತನ ಮತ್ತು ದೈನ್ಯತೆಯ ಮೂಲಕ
ನಾನು ಬಯಸಿದ್ದನ್ನು ಪಡೆಯಲು ಹಾರೈಸುವೆನು
يَا عَذُوْلِي لَا تَلُمْنِي
مَا عَلَى الْعَاشِقُ مَلَامْ
ಓ ನನ್ನ ಟೀಕಾಕಾರನೇ, ನನ್ನನ್ನು ದೂಷಿಸಬೇಡ
ಪ್ರೇಮಿಯ ಮೇಲೆ ಯಾವುದೇ ನಿಂದನೆಯಿಲ್ಲ
اُدْنُ مِنِّي وَارْوِ عَنِّيْ
أَنَا فِي الْعِشْقِ إِمَامْ
ನನ್ನ ಬಳಿ ಬಾ ಮತ್ತು ನನ್ನ ಕಥೆಯನ್ನು ನಿರೂಪಿಸು
ಏಕೆಂದರೆ ಪ್ರೇಮದ ಕಲೆಯಲಿ ನಾನೊಬ್ಬ ಗುರುವಾಗಿದ್ದೇನೆ
خَمْرَةُ الْأَحْبَابِ تُجْلَ
هِيَ حِلٌّ لَا حَرَامْ
ಪ್ರಿಯತಮರ ಪ್ರೇಮದ ಸುಧೆಯು ಸುರಿಯಲ್ಪಟ್ಟಿದೆ
ಇದು ಧರ್ಮಬದ್ಧವಾದುದು, ನಿಷೇಧಿತವಲ್ಲ
مِنْ عُيُونِ الْعِيْنِ تُمْلَى
صَانَهَا الْبَرُّ الْسَّلَامْ
ಸುಂದರ ನೇತ್ರಗಳ ಸೆಲೆಗಳಿಂದ ಇದು ಉಕ್ಕಲಿ
ಪರಮ ದಯಾಮಯನಾದ ಶಾಂತಿದಾತನು ಇದನ್ನು ರಕ್ಷಿಸಲಿ
يَا أَخَا الْأَشْوَاقِ يَمِّمْ
سَيِّدَ الْرُّسْلِ الْكِرَامْ
ಓ ಹಂಬಲದ ಸಹೋದರನೇ, ನಿನ್ನ ಹಾದಿಯನ್ನು ತಿರುಗಿಸು
ಶ್ರೇಷ್ಠ ಪ್ರವಾದಿಗಳ ಒಡೆಯನ ಕಡೆಗೆ
وَاغْنَمِ الْذِّكْرَ وَزَمْزِمْ
بِصَلَاةٍ مَعْ سَلَامْ
ಸ್ಮರಣೆಯ ಲಾಭವನ್ನು ಪಡೆ ಮತ್ತು ಗುಣಗುಟ್ಟು
ಅವರ ಮೇಲೆ ನಿರಂತರ ಶುಭ ಹಾರೈಕೆ ಹಾಗೂ ಶಾಂತಿಯಿರಲಿ
لِحَبِيْبِ الله أَحْمَدْ
كُلَّمَا جَنَّ الْظَّلَامْ
ಅಲ್ಲಾಹನ ಪ್ರಿಯತಮ ಅಹ್ಮದ್ ಅವರ ಮೇಲೆ
ಪ್ರತಿ ಬಾರಿ ರಾತ್ರಿಯ ಕತ್ತಲೆಯು ಆವರಿಸಿದಾಗಲೂ
كُلُّ مَنْ وَالَاهُ يَسْعَدْ
وَيَنَالْ حُسْنَ الْخِتَامْ
ಅವರನ್ನು ಪ್ರೀತಿಸುವ ಪ್ರತಿಯೊಬ್ಬರೂ ಸೌಭಾಗ್ಯವಂತರು
ಮತ್ತು ಅವರು ಸುಂದರವಾದ ಅಂತ್ಯವನ್ನು ಕಾಣುವರು