حَسْنَاءُ تُرْبِعُنَا
ನಮ್ಮನ್ನು ಮಂತ್ರಮುಗ್ಧಗೊಳಿಸುವ ಸೌಂದರ್ಯವತಿ
Kn
حَسْنَاءُ تُرْبِعُنَا
دَوْمًا وَتَعْرِفُنَا
ನಮನ್ನು ಆಳುವ ಸುಂದರಿ ಇವಳು
ಸದಾ ನಮ್ಮನ್ನು ಅರಿತಿರುವವಳು
حَلَّتْ لِتَمْنَحَنَا
عَدْلًا وَإِحْسَانَا
ನ್ಯಾಯ ಮತ್ತು ಉಪಕಾರವ ನೀಡಲು ಬಂದಳು
ಕೃಪೆಯ ಮಳೆಯನ್ನು ಹರಿಸಲು ಬಂದಳು
مِنْ قُدْرَةٍ شَرُفَتْ
مَيْمُونَةٌ عُرِفَتْ
ಘನತೆಯ ಶಕ್ತಿಯಿಂದ ಶ್ರೇಷ್ಠಳಾದವಳು
ಶುಭದಾಯಕಿಯೆಂದು ಪ್ರಸಿದ್ಧಳಾದವಳು
بِالْحُسْنِ قَدْ وُصِفَتْ
سِرًّا وَإِعْلَانَا
ಸೌಂದರ್ಯದಿಂದ ವರ್ಣಿತಳಾದವಳು
ಗುಪ್ತವಾಗಿಯೂ ಮತ್ತು ಬಹಿರಂಗವಾಗಿಯೂ
تَكَامَلَتْ أَلَقَا
خَلْقًا حَكَى خُلُقَا
ಪ್ರಭೆಯಲ್ಲಿ ಪರಿಪೂರ್ಣಳಾದವಳು
ಅವಳ ರೂಪವು ಗುಣವನ್ನೇ ಪ್ರತಿಫಲಿಸಿತು
وَالْكُلُّ مُتَّسِقا
مِنْهُ الْضِّيَا بَانَا
ಎಲ್ಲವೂ ಸಾಮರಸ್ಯದಿಂದ ಕೂಡಿದೆ
ಅದರಿಂದಲೇ ದಿವ್ಯ ಪ್ರಕಾಶವು ಪ್ರಕಟವಾಯಿತು
رَاقَتْ مَشَارِبُهَا
نِيلَتْ مَطَالِبُهَا
ಅವಳ ಪಾನೀಯಗಳ ಮೂಲವು ಶುದ್ಧವಾಯಿತು
ಅವಳ ಆಸೆಗಳೆಲ್ಲವೂ ಈಡೇರಿದವು
صَارَتْ مَنَاقِبُهَا
لِلْفَخْرِ كَيْوَانَا
ಅವಳ ಸದ್ಗುಣಗಳು ಈಗ
ಹೆಮ್ಮೆಯ ಉನ್ನತ ಶಿಖರವಾದವು
عَمَّتْ مَآثِرُهَا
سَارَتْ بَشَائِرُهَا
ಅವಳ ಕೀರ್ತಿಯು ಎಲ್ಲೆಡೆ ಪಸರಿಸಿತು
ಅವಳ ಶುಭ ಸುದ್ದಿಗಳು ಹರಡಿದವು
تَهْدِي خَوَاطِرُهَا
الْأَرْوَاحَ إِيقَانَا
ಅವಳ ಆಲೋಚನೆಗಳು ದಾರಿತೋರುತ್ತವೆ
ಆತ್ಮಗಳಿಗೆ ದೃಢವಾದ ನಂಬಿಕೆಯನ್ನು
فِي وَصْفِهِ عِبَرٌ
لَمْ يَحْكِهَا بَشَرٌ
ಅವನ ವರ್ಣನೆಯಲ್ಲಿ ಪಾಠಗಳಿವೆ
ಯಾವ ಮಾನವನೂ ಇದನ್ನು ವಿವರಿಸಲಾರ
وَالْكُلُّ مُنْبَهِرٌ
مَا انْفَكَّ هَيْمَانَا
ಪ್ರತಿಯೊಬ್ಬರೂ ಬೆರಗಾಗಿದ್ದಾರೆ
ನಿರಂತರ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ
فَقَامَةٌ رَبْعَةْ
كَمَا تَرَى طَبْعَهْ
ಮಧ್ಯಮ ಎತ್ತರದ ಆ ವ್ಯಕ್ತಿತ್ವ
ಅವನ ಸಹಜ ಗುಣವನ್ನು ನೀ ನೋಡು
تَفُوقُ بِالطَّلْعَهْ
مَنْ طَالَ سِيقَانَا
ತೋರಿಕೆಯಲ್ಲಿ ಅತಿ ಶ್ರೇಷ್ಠನಾದವನು
ಎತ್ತರದ ಕಾಯದವರಿಗಿಂತಲೂ ಮಿಗಿಲು
فِي وَجْهِهِ قَمَرٌ
فِي ثَغْرِهِ دُرَرٌ
ಅವನ ಮುಖದಲ್ಲಿ ಚಂದಿರನಿದ್ದಾನೆ
ಅವನ ಹಲ್ಲುಗಳು ಮುತ್ತುಗಳಂತಿವೆ
فِي نُطْقِهِ خَفَرٌ
بِالْصَّمْتِ قَدْ زَانَا
ಅವನ ಮಾತಿನಲ್ಲಿ ವಿನಯವಿದೆ
ಮೌನವು ಅವನಿಗೆ ಅಂದವನ್ನು ನೀಡಿದೆ
وَجَبْهَةٌ عَرُضَتْ
لِلَّهِ قَدْ خُفِضَتْ
ಅಗಲವಾದ ಆ ಹಣೆ
ದೇವರೆದುರು ವಿನಮ್ರವಾಗಿ ಬಾಗಿದೆ
وَبِالْنُّهَى نَهَضَتْ
عِزًّا وَعِرْفَانَا
ವಿವೇಕದೊಂದಿಗೆ ಅದು ಎದ್ದಿದೆ
ಗೌರವ ಮತ್ತು ಜ್ಞಾನದೊಂದಿಗೆ
فِي وَجْهِهِ بَلَجٌ
فِي عَيْنِهِ دَعَجٌ
ಅವನ ಮುಖದಲ್ಲಿ ಕಾಂತಿಯಿದೆ
ಅವನ ಕಣ್ಣುಗಳಲ್ಲಿ ಕಡುಗಪ್ಪಿನ ಅಂದವಿದೆ
فِي حَاجِبٍ زَجَجٌ
بِالْحُسْنِ مُزْدَانَا
ಬಾಗಿದ ಹುಬ್ಬುಗಳ ಸೌಂದರ್ಯ
ರೂಪದಿಂದ ಅಲಂಕೃತಗೊಂಡಿದೆ
إِنْ رِيءَ يَتْبَعُهُ
نُورًا يُزَامِنُهُ
ಅವನನ್ನು ಕಂಡರೆ ಹಿಂಬಾಲಿಸುತ್ತದೆ
ಅವನ ಜೊತೆಯಿರುವ ದಿವ್ಯ ಪ್ರಕಾಶ
فَالْأَنْفُ مَارِنُهُ
أَقْنَى وَحِدْبَانَا
ಅವನ ಮೂಗಿನ ಆಕಾರವು
ಎತ್ತರವೂ ಮತ್ತು ಸುಂದರವೂ ಆಗಿದೆ
وَثَغْرُهُ ضَلِعٌ
وَالْصَّدْرُ مُتَّسِعٌ
ವಿಶಾಲವಾದ ಅವನ ಬಾಯಿ
ಅಗಲವಾದ ಅವನ ಎದೆಯ ಭಾಗ
وَالْبَطْنُ مُرْتَجِعٌ
بِالْصَّدْرِ خَمْصَانَا
ಎದೆಯ ಸಮನಾದ ಹೊಟ್ಟೆ
ತೆಳ್ಳಗಿನ ಸುಂದರ ಶರೀರ
وَالْوَجْهُ دُرِّيٌّ
وَالْلَّوْنُ وَرْدِيٌّ
ಮುತ್ತಿನಂತಹ ಹೊಳೆಯುವ ಮುಖ
ಗುಲಾಬಿಯ ಬಣ್ಣದ ಕಾಂತಿ
وَالْرُّوحُ نُورِيٌّ
أَضَاءَ أَكْوَانَا
ಆ ಪ್ರಕಾಶಮಾನವಾದ ಆತ್ಮವು
ಇಡೀ ಬ್ರಹ್ಮಾಂಡವನ್ನೇ ಬೆಳಗಿಸಿತು
ضَخْمُ الْكَرَادِيسِ
زَاكِي الْأَحَاسِيسِ
ಬಲಿಷ್ಠವಾದ ಕೀಲುಗಳುಳ್ಳವನು
ಪವಿತ್ರವಾದ ಭಾವನೆಗಳನ್ನು ಉಳ್ಳವನು
فَرْدُ الْنَّوَامِيسِ
مَا مِثْلُهُ كَانَا
ನಿಯಮಗಳಲ್ಲಿ ಸಾಟಿಯಿಲ್ಲದವನು
ಅವನಂತಹವರು ಯಾರೂ ಇರಲಿಲ್ಲ
أَكْحَلُ أَجْفَانٍ
أَشْنَبُ أَسْنَانٍ
ಕಾಡಿಗೆಯ ಕಣ್ಣು ರೆಪ್ಪೆಗಳು
ಶುಭ್ರವಾದ ಬೆಳ್ಳನೆಯ ಹಲ್ಲುಗಳು
حَبَّاتُ رُمَّانٍ
هَلْ رَيْتَ رُمَّانَا
ದಾಳಿಂಬೆ ಹಣ್ಣಿನ ಕಾಳುಗಳಂತೆ
ಇಂತಹ ದಾಳಿಂಬೆಯನ್ನು ನೀ ಕಂಡಿರುವೆಯಾ?
وَلِحْيَةٌ كَثَّا
تَنَاسَقَتْ بَثَّا
ದಟ್ಟವಾದ ಸುಂದರ ಗಡ್ಡ
ಸಮನಾಗಿ ಹರಡಿಕೊಂಡಿದೆ
وَجُمَّةٌ أَثَّا
لَمْ تَعْدُ آذَانَا
ದಟ್ಟವಾದ ಮುಂಗುರುಳುಗಳು
ಕಿವಿಯ ಅಂಚನ್ನು ಮೀರಲಿಲ್ಲ
بَدْرُ الْدُّجَى فَمُهُ
إِنْ رِيءَ مَبْسَمُهُ
ಕತ್ತಲೆಯ ಹುಣ್ಣಿಮೆಯಂತೆ ಅವನ ಬಾಯಿ
ಅವನ ಮಂದಹಾಸವನ್ನು ಕಂಡಾಗ
وَالْكُلُّ مَنْسَمُهُ
بَرًّا وَخُلْجَانَا
ಅವನ ಸುಗಂಧವು ಎಲ್ಲೆಡೆ ಇದೆ
ಭೂಮಿ ಮತ್ತು ಸಾಗರಗಳಲೆಲ್ಲಾ
فَالْرَّحْمُ وَاصِلُهُ
وَالْكَلُّ حَامِلُهُ
ಸಂಬಂಧಗಳನ್ನು ಬೆಸೆಯುವವನು
ಕಷ್ಟಗಳನ್ನು ಹೊತ್ತುಕೊಳ್ಳುವವನು
وَالْخَيْرُ فَاعِلُهُ
سِرًّا وَإِعْلَانَا
ಒಳಿತನ್ನೇ ಮಾಡುವವನು ಅವನು
ರಹಸ್ಯವಾಗಿ ಮತ್ತು ಬಹಿರಂಗವಾಗಿ
فِي الْخَلْقِ هَيْبَتُهُ
فِي الْحَقِّ غَيْبَتُهُ
ಸೃಷ್ಟಿಯ ನಡುವೆ ಅವನ ಘನತೆ
ಸತ್ಯದ ತನ್ಮಯತೆಯಲ್ಲಿ ಅವನ ಅನ್ವೇಷಣೆ
تَفُوقُ طِيبَتُهُ
جِنًّا وَإِنْسَانَا
ಅವನ ಮೃದುತ್ವವು ಮಿಗಿಲಾದದ್ದು
ಜಿನ್ ಮತ್ತು ಮಾನವರಿಗಿಂತಲೂ
وَحَبْلُ سُرَّتِهِ
مِنْ حُسْنِ غُرَّتِهِ
ಹೊಟ್ಟೆಯ ಮೇಲಿನ ಆ ಕೂದಲಿನ ಸಾಲು
ಅವನ ಮುಖದ ಕಾಂತಿಯ ಸೌಂದರ್ಯದಿಂದ
مَا مِثْلُ نَظْرَتِهِ
عِزًّا وَإِيْمَانَا
ಅವನ ದೃಷ್ಟಿಗೆ ಸಾಟಿಯಿಲ್ಲ
ಘನತೆ ಮತ್ತು ನಂಬಿಕೆಯಲ್ಲಿ
قَدْ دَقَّ مَسْرُبَةً
وَفَاقَ مَرْتَبَةً
ಸೂಕ್ಷ್ಮವಾದ ಆ ಕೂದಲಿನ ಸಾಲು
ಸ್ಥಾನಮಾನದಲ್ಲಿ ಅವನು ಶ್ರೇಷ್ಠನಾದನು
وَعَزَّ مَنْقَبَةً
سَادَ الْوَرَى شَانَا
ಸದ್ಗುಣಗಳಲ್ಲಿ ಅತಿ ಶ್ರೇಷ್ಠನು
ಜಗತ್ತಿನ ಮೇಲೆ ಪ್ರಭುತ್ವ ಸಾಧಿಸಿದನು
قَلِيلُ لَحْمِ عَقِبْ
وَالْصَّدْرُ مِنْهُ رَحِبْ
ತೆಳ್ಳನೆಯ ಹಿಮ್ಮಡಿಯ ಪಾದಗಳು
ವಿಶಾಲವಾದ ಆ ಎದೆಯ ಭಾಗ
فَصْلَ الْخِطَابِ وُهِبْ
فَفَاقَ سَحْبَانَا
ಸ್ಪಷ್ಟವಾದ ಮಾತುಗಾರಿಕೆ ಅವನದು
ಸಹ್ಬಾನನನ್ನೂ ಮೀರಿದ ವಾಗ್ಮಿ ಅವನು
كَالْمِسْكِ فِي هَبَبٍ
يَنْحَطُّ مِنْ صَبَبٍ
ಮಂದಾನಿಲದ ಕಸ್ತೂರಿಯಂತೆ
ಎತ್ತರದಿಂದ ಇಳಿದು ಬರುವವನಂತೆ
يُنْسِي أَخَا تَعَبٍ
أَهْلًا وَبُلْدَانَا
ದಣಿದವನು ಮರೆಯುವಂತೆ ಮಾಡುವನು
ತನ್ನವರನ್ನು ಮತ್ತು ತನ್ನ ನಾಡನ್ನು
فَحُبُّهُ إِيمَانْ
وَبُغْضُهُ كُفْرَانْ
ಅವನ ಮೇಲಿನ ಪ್ರೀತಿಯೇ ನಂಬಿಕೆ
ಅವನ ದ್ವೇಷವೇ ಸತ್ಯನಿರಾಕರಣೆ
يَا وَيْلَ مَنْ قَدْ شَانْ
فِي الْمَدْحِ إِنْسَانَا
ಪ್ರಶಂಸಾರ್ಹನನ್ನು ಅವಮಾನಿಸುವವನಿಗೆ
ಕೇಡು ಕಾದಿದೆ ನಿಶ್ಚಯವಾಗಿ
يَا رَبِّ أَسْعِدْنَا
بِنُورِهِ عِدْنَا
ಹೇ ಪ್ರಭುವೇ ನಮಗೆ ಭಾಗ್ಯ ನೀಡು
ಅವನ ಪ್ರಕಾಶದೊಂದಿಗೆ ನಮ್ಮನ್ನು ಕರೆದೊಯ್ಯು
حَتَّى نَرَى الْحُسْنَى
دُنْيَا وَأُخْرَانَا
ಆ ಪರಮ ಸುಖವನ್ನು ನಾವು ಕಾಣುವವರೆಗೆ
ಇಹಲೋಕ ಮತ್ತು ಪರಲೋಕದಲ್ಲಿ
صَلَّى وَسَلَّمَ مَنْ
أَوْلَى الْوَرَى مِنَنَا
ಆಶೀರ್ವಾದ ಮತ್ತು ಶಾಂತಿ ಕರುಣಿಸಲಿ
ಜಗತ್ತಿಗೆ ಉಪಕಾರಗಳನ್ನು ನೀಡಿದವನು
عَلَى الْنَّبِيِّ زَمَنَا
رَبٌّ عَلَا شَانَا
ಪ್ರವಾದಿಯ ಮೇಲೆ ನಿರಂತರವಾಗಿ
ಘನತೆಯುಳ್ಳ ಆ ಪ್ರಭುವಿನಿಂದ
كَذَلِكَ الْزَّهْرَا
وَأُمِّهَا الْغَرَّا
ಹಾಗೆಯೇ ಪುಣ್ಯವತಿ ಝಹ್ರಾಳ ಮೇಲೆ
ಮತ್ತು ಅವಳ ಶ್ರೇಷ್ಠ ತಾಯಿಯ ಮೇಲೆ
وَآلِهِمْ طُرَّا
مَا الْبَدْرُ نَاغَانَا
ಮತ್ತು ಅವರ ಸಮಸ್ತ ಕುಟುಂಬದ ಮೇಲೆ
ಚಂದಿರನು ನಮಗೆ ಬೆಳಕು ನೀಡುವವರೆಗೆ