اَلـلَّـهُ يَـا اَلـلَّـه صَـلَّـى عَـلَـى الـزَّيْـن
ಓ ಅಲ್ಲಾಹ್! ಆ ಸುಂದರನ ಮೇಲೆ ಆಶೀರ್ವಾದಗಳನ್ನು ಕರುಣಿಸು.
Kn
اَلـلَّـهُ يَـا اَلـلَّـه
صَـلْـوا عَـلَـى الْـزَّيْـنِ
ಅಲ್ಲಾಹು ಯಾ ಅಲ್ಲಾಹ್
ಆ ಸುಂದರ ರೂಪಿಯ ಮೇಲೆ ಸ್ತುತಿ ಸಲ್ಲಿಸಿರಿ
طَـاطَـا الْـقَـمَـرْلِأَحْـمَـد
وَانْـشَـقَّ نِـصْـفَـيْـنِـى
ಚಂದಿರನು ಅಹ್ಮದರಿಗೆ ವಿಧೇಯನಾದನು
ಮತ್ತು ಎರಡು ಭಾಗವಾಗಿ ಸೀಳಲ್ಪಟ್ಟನು
أَبُـو بَـكْـرُ يَـا صِـدِّيـقْ
صَـاحِـبِ الْـنَّـبِـى وَرَفِـيـق
ಓ ಅಬೂಬಕರ್, ಓ ಸಿದ್ದೀಖ್
ಪ್ರವಾದಿಯವರ ಸಂಗಾತಿ ಮತ್ತು ಪರಮ ಮಿತ್ರರೇ
بِرُوحُهْ فَدَاهْ فِي الضِّيقْ
مِـنْ لَـدْغَـةِ الْـنِّـيـنِـى
ಸಂಕಷ್ಟದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದಿರಿ
ಅವರಿಗಾಗಿ ಹಾವಿನ ಕಡಿತವನ್ನೂ ಸಹಿಸಿದಿರಿ
لَـمَّـا عُـمَـرْ أَسْـلَـم
فَـرِحَ الْـنَّـبِـى وَتَـبَـسَّـم
ಉಮರರು ಇಸ್ಲಾಂ ಧರ್ಮಕ್ಕೆ ಬಂದಾಗ
ಪ್ರವಾದಿಯವರು ಹರ್ಷಿಸಿ ನಸುನಕ್ಕರು
تَـبَـاشَـرَ الْإِسْـلَام
بِـدُخُـولِـهْ فِـي الْـدِّيـنِـى
ಮತ್ತು ಇಸ್ಲಾಂ ಶುಭ ಸುದ್ದಿಯನ್ನು ಪಡೆಯಿತು
ಅವರ ಧರ್ಮಪ್ರವೇಶದೊಂದಿಗೆ
عُـثْـمَـانُ يَـا عُـثْـمَـان
يَـا جَـامِـعَ الْـقُـرْءَان
ಓ ಉಸ್ಮಾನ್, ಓ ಉಸ್ಮಾನ್
ಓ ಕುರ್-ಆನ್ ಅನ್ನು ಕ್ರೋಡೀಕರಿಸಿದವರೇ
صِـهْـرِ الْـنَّـبِـى الْـعَـدْنَـان
زَوَّجَـهُ بِـنْـتَـيْـنِـى
ಅದ್ನಾನಿ ಪ್ರವಾದಿಯ ಅಳಿಯರೇ
ಅವರು ತಮ್ಮ ಇಬ್ಬರು ಪುತ್ರಿಯರನ್ನು ನಿಮಗೆ ವಿವಾಹ ಮಾಡಿಕೊಟ್ಟರು
عَـلِـىُّ يَـا كَـرَّار
سَـيْـفُـكَ طَـوِيـل بَـتَّـار
ಓ ಅಲಿ, ಓ ಪರಾಕ್ರಮಿ ಯೋಧನೇ
ನಿಮ್ಮ ಕತ್ತಿಯು ಉದ್ದವೂ ಮತ್ತು ಹರಿತವೂ ಆಗಿದೆ
يَـا هَـازِمَ الْـكُـفَّـار
قَـتَـلَ الْـمَـلَاعِـيـنِـى
ಸತ್ಯನಿಷೇಧಿಗಳನ್ನು ಪರಾಜಯಗೊಳಿಸಿದವರೇ
ಶಪಿಸಲ್ಪಟ್ಟ ವೈರಿಗಳನ್ನು ಸದೆಬಡಿದವರೇ
جَـاتُـهْ الْـمُـرَبِّـيَـةْ
حَـلِـيـمَـةْ الْـسَّـعْـدِيَّـة
ಅವರ ಸಾಕುತಾಯಿ ಅವರ ಬಳಿ ಬಂದರು
ಅವರು ಹಲೀಮ ಅಲ್-ಸಅದಿಯ್ಯಾ
قَـالَـتْ وَهَـبُـوةْ لِـيَـا
يَـا رَبِّ هَـنِّـيـنِـى
ಅವರು ಹೇಳಿದರು, "ಇವರನ್ನು ನನಗೆ ದಯಪಾಲಿಸು
ಓ ಒಡೆಯನೇ, ಇವರಿಂದ ನನಗೆ ಸಂತೋಷವನ್ನು ಕರುಣಿಸು"
جَـالُـه الْـجَـمَـل جَـالُـه
يَـزْحَـف عَـلَـى عِـقَـالُـه
ಒಂಟೆಯು ಅವರ ಬಳಿ ಬಂದಿತು
ತನ್ನ ಹಗ್ಗವನ್ನು ಎಳೆದುಕೊಂಡು ತೆವಳುತ್ತಾ
لَـمَّـا جَـالُـه جَـمَـالُـه
سَـلِّـم عَـلَـى الـزَّيْـنِـى
ಅದು ಅವರ ಸೌಂದರ್ಯವನ್ನು ಕಂಡಾಗ
ಆ ಸುಂದರ ರೂಪಿಗೆ ಸಲಾಮನ್ನರ್ಪಿಸಿತು